ಪ್ರಸ್ತುತ ಭಾಷೆ: kn ಕನ್ನಡ

ಭಾಷೆ

ಮುಖಪುಟ - ಪುಸ್ತಕಗಳು - ಕ್ರಿಪ್ಟೊನೈಟ್‍ನ ಸಂಹಾರ

ಕ್ರಿಪ್ಟೊನೈಟ್‍ನ ಸಂಹಾರ
ಶಿಕ್ಷಕ: ಜಾನ್ ಬೆವೆರ್
ಭಾಷೆಯಲ್ಲಿ ಲಭ್ಯವಿದೆ:

ನಿನ್ನ ಶಕ್ತಿಹರಣ ಮಾಡುವಂಥದನ್ನು ಸಂಹಾರ ಮಾಡಲು ನಿನಗೆ ಸಾಧ್ಯವಿದೆ

ಸೂಪರ್‍ಮ್ಯಾನ್ ಎಲ್ಲಾ ಅಡೆತಡೆಗಳನ್ನು ಮೀರಿ ಪ್ರತಿಯೊಂದು ವೈರಿಯನ್ನು ಸೋಲಿಸುವ ರೀತಿಯಲ್ಲಿಯೇ ಕ್ರಿಸ್ತನ ಅನುಯಾಯಿಗಳು ಸಹ ತಮಗೆದುರಾಗುವ ಯಾವುದೇ ಸವಾಲನ್ನು ಗೆಲ್ಲುವ ಸಾಮಥ್ರ್ಯ ಹೊಂದಿದ್ದಾರೆ. ಆದರೆ ಸೂಪರ್‍ಮ್ಯಾನ್‍ಗೆ ಇರುವಂತೆಯೇ, ನಮ್ಮ ಬಲವನ್ನು ಕುಗ್ಗಿಸಶಕ್ತವಾದ ಕ್ರಿಪ್ಟೊನೈಟ್‍ನ ಸಮಸ್ಯೆ ನಮಗೂ ಇದೆ.

ನಿಜ ಸೂಪರ್‍ಮ್ಯಾನ್ ಮತ್ತು ಕ್ರಿಪ್ಟೊನೈಟ್ ಇಬ್ಬರೂ ಕಾಲ್ಪನಿಕ ಚಿತ್ರಣಗಳು. ಆದರೆ ಆತ್ಮೀಕ ಕ್ರಿಪ್ಟೊನೈಟ್ ಎನ್ನುವುದು ಕಾಲ್ಪನಿಕವಲ್ಲ.

ಮೊದಲ ಶತಮಾನದ ಕ್ರೈಸ್ತರಲ್ಲಿ ಪ್ರಬಲವಾಗಿದ್ದ ದೈವೀಕ ಶಕ್ತಿಯನ್ನು ನಮ್ಮಲ್ಲಿ ಅನೇಕರು ಅನುಭವಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ಈ ಪುಸ್ತಕವು ಉತ್ತರಗಳನ್ನು ನೀಡುತ್ತದೆ.

ಕ್ರಿಪ್ಟೊನೈಟ್‍ನ ಸಂಹಾರ ಪುಸ್ತಕದಲ್ಲಿ ಜಾನ್ ಬಿವಿಯರ್‍ರವರು, ಕ್ರಿಪ್ಟೊನೈಟ್ಎಂ ದರೆ ಏನು, ಅದು ಯಾಕೆ ನಮ್ಮ ಸಭೆಗಳಲ್ಲಿ ರಾಜೀಮನೋಭಾವನೆಯನ್ನು
ಬಿತ್ತುತ್ತಿದೆ ಮತ್ತು ಅದರ ಬಂಧನದಿಂದ ಬಿಡಿಸಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತಾರೆ.

ಇದು ಪುಕ್ಕಲು ಹೃದಯದವರಿಗಲ್ಲ, ಕ್ರಿಪ್ಟೊನೈಟ್‍ನ ಸಂಹಾರ ಪುಸ್ತಕವು ನಿಮ್ಮನ್ನು ಆತ್ಮೀಕ ಉಲ್ಲಾಸದ ಅತಿರೇಕಕ್ಕೂ ಕೊಂಡೊಯ್ಯುವುದಿಲ್ಲ. ಆದರೆ ಸವಾಲೆನಿಸಿದರೂ ರೂಪಾಂತರಗೊಳಿಸುವ ಮಾರ್ಗದಲ್ಲಿ ನಡೆಯಲು ಆಶಿಸುವ ಕ್ರಿಸ್ತನ ಯಾವ ಅನುಯಾಯಿಗಾದರೂ ಇದು ಗಂಬಿüೀರವಾದ ಸತ್ಯವಾಗಿದೆ.

ಡೌನ್ಲೋಡ್ ಮಾಡಿ (~1.23 MB)

ಹಂಚಿಕೊಳ್ಳಿ